Innastu Bekenna Hrudayakke Rama| Shashikala Sunil | Gajanana Sharma | Arun Andrew |Sharan Hiremat
Lyrics :- Sri Gajanana Sharma
Programming, Mixing & Mastering :- Arun Andrew
Camera :- Sharan Hiremat
Editing :- Sunil
ಶ್ರೀರಾಮ ರಾಮ ರಾಮೇತಿ ರಾಮೇ ರಾಮೇ ಮನೋರಮೇ ।
ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ ॥
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
(ರಾಮ ರಾಮ ರಾಮ ರಾಮ)
ನಿನ್ನಿಷ್ಟದಂತೆನ್ನ ಇಟ್ಟಿರುವೆ ರಾಮ|
ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ|
ಕಷ್ಟಗಳ ಕೊಡಬೇಡ ಎನ್ನಲಾರೆ ರಾಮ|
ಕಷ್ಟ ಸಹಿಸುವ ಸಹನೆ ಕೊಡು ನನಗೆ ರಾಮ|
ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ|
ಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮ|
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
(ರಾಮ ರಾಮ ರಾಮ ರಾಮ)
ಒಳಿತಿನೆಡೆ ಮುನ್ನೆಡೆವ ಮನವಕೊಡು ರಾಮ|
ಸೆಳೆತಕ್ಕೆ ಸಿಗದಂಥ ಸ್ಥಿರತೆ ಕೊಡು ರಾಮ|
ನಿನ್ನೆಗಳ ಪಾಪಗಳ ಸೊನ್ನೆಯಾಗಿಸು ರಾಮ|
ನಾಳೆಗಳು ಪುಣ್ಯಗಳ ಹಾದಿಯಾಗಲಿ ರಾಮ|..
ನನ್ನ ಬಾಳಿಗೆ ನಿನ್ನ ಹಸಿವ ಕೊಡು ರಾಮ|
ನನ್ನ ತೋಳಿಗೆ ನಿನ್ನ ಕಸುವ ಕೊಡು ರಾಮ|
ಕಣ್ಣು ಕಳೆದರು ನಿನ್ನ ಕನಸ ಕೊಡು ರಾಮ|
ನನ್ನ ಮರಣಕೆ ನಿನ್ನ ಚರಣ ಕೊಡು ರಾಮ|
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
(ರಾಮ ರಾಮ ರಾಮ ರಾಮ)
ಕೌಸಲ್ಯೆಯಾಗುವೆನು ಮಡಿಲಲಿರು ರಾಮ|
ವೈದೇಹಿಯಾಗುವೆನು ಒಡನಾಡು ರಾಮ|
ಪಾದುಕೆಯ ತಲೆಯಲಿಡು ಭರತನಾಗುವೆ ರಾಮ|
ಸಹವಾಸ ಕೊಡು ನಾನು ಸೌಮಿತ್ರಿ ರಾಮ|
ಸುಗ್ರೀವನಾಗುವೆನು ಸ್ನೇಹ ಕೊಡು ರಾಮ|
ಹನುಮನಾಗುವೆ ನಿನ್ನ ಸೇವೆ ಕೊಡು ರಾಮ|
ಶಬರಿಯಾಗುವೆ ನಿನ್ನ ಭಾವ ಕೊಡು ರಾಮ|
(ರಾಮ ರಾಮ ರಾಮ ರಾಮ)
ಮಡಿಲಲ್ಲಿ ಮರಣಕೊಡು ನಾ ಜಟಾಯೂವು ರಾಮ|
ಮುಡಿಯಲ್ಲಿ ಅಡಿಯನಿಡು ನಾ ಅಹಲ್ಯೆಯು ರಾಮ|
ನಾ ವಿಭೀಷಣ ಶರಣು ಭಾವ ಕೊಡು ರಾಮ|
ನನ್ನೊಳಿಹ ರಾವಣಗೆ ಸಾವ ಕೊಡು ರಾಮ|
ಕಣ್ಣೀರು ಕರೆಯುವೆನು ನನ್ನ ತನ ಕಳೆ ರಾಮ|
ನಿನ್ನೊಳಗೆ ಕರಗುವೆನು ನಿರ್ಮೋಹ ಕೊಡು ರಾಮ|
(ರಾಮ ರಾಮ ರಾಮ ರಾಮ)
ಋತ ನೀನೆ ಋತು ನೀನೆ ಶೃತಿ ನೀನೆ ರಾಮ|
ಮತಿ ನೀನೆ ಗತಿ ನೀನೆ ದ್ಯುತಿ ನೀನೆ ರಾಮ|
ಆರಂಭ ಅಸ್ತಿತ್ತ್ವ ಅಂತ್ಯ ನೀ ರಾಮ|
ಪೂರ್ಣ ನೀ ಪ್ರಕಟ ನೀ ಆನಂದ ರಾಮ|
ಹರ ನೀನೆ ಹರಿ ನೀನೆ ಬ್ರಹ್ಮ ನೀ ರಾಮ|
ಗುರು ನೀನೆ ಗುರಿ ನೀನೆ ಅರಿವು ನೀ ರಾಮ|
ರಘುರಾಮ ರಘುರಾಮ ರಘುರಾಮ ರಘುರಾಮ|
ನಗುರಾಮ ನಗರಾಮ ಜಗರಾಮ ರಾಮ|
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
shri ram song